Bigg Boss Kannada Season 5 : ಜಯ ಶ್ರೀನಿವಾಸನ್ 420, ಅಂದ್ರು ದಿವಾಕರ್ | ಸುದೀಪ್ ಪ್ರತಿಕ್ರಿಯೆ?

2017-11-28 1,549

Bigg Boss Kannada 5: Week 6: Diwakar speaks about Jaya Srinivasan & about his profession as well. Jaya Srinivasan is a 420, says Diwakar. Sudeep reacts to this statement of Diwakar & slams.


'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.! 'ಬಿಗ್ ಬಾಸ್' ಮನೆಯಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್ ಹಾಗೂ 'ಸಂಖ್ಯಾಶಾಸ್ತ್ರಜ್ಞ' ಜಯಶ್ರೀನಿವಾಸನ್ ಮಧ್ಯೆ ಎಲ್ಲವೂ ಸರಿಯಿಲ್ಲ. ಈಗಾಗಲೇ ಹಲವು ವಿಚಾರಗಳಿಗೆ ಜಯಶ್ರೀನಿವಾಸನ್ ಹಾಗೂ ದಿವಾಕರ್ ಮಧ್ಯೆ ಗಲಾಟೆ ನಡೆದಿದೆ. ಸಲುಗೆಯಿಂದ ಮಾತನಾಡುವ ದಿವಾಕರ್ ಮೇಲೆ ಜಯಶ್ರೀನಿವಾಸನ್ ಗೆ ಬೇಸರ ಇದೆ. ಹೀಗಾಗಿ, ದಿವಾಕರ್ ರವರಿಂದ ಸ್ವಲ್ಪ ದೂರ ಸರಿದಿರುವ ಜಯಶ್ರೀನಿವಾಸನ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಬಗ್ಗೆ ಕಾಮೆಂಟ್ ಮಾಡಿದರು.'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಸ್/ನೋ ಪ್ರಶ್ನೆಗಳ ಸುತ್ತಿನಲ್ಲಿ, ''ತಾವು ಯಾಕೆ ಎಲ್ಲರ ಜೊತೆ ಜಗಳ ಆಡುತ್ತಿದ್ದೇನೆ ಅಂತ ಸ್ವತಃ ದಿವಾಕರ್ ಅವರಿಗೇ ಗೊತ್ತಿಲ್ಲ.!'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು.ಸುದೀಪ್ ಕೇಳಿದ ಪ್ರಶ್ನೆಗೆ 'ನೋ' ಎನ್ನುತ್ತಾ, ''ದಿವಾಕರ್ ಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ''ಕಳೆದ ಸೀಸನ್ ನಲ್ಲಿ ಎಲ್ಲದಕ್ಕೂ ಖಂಡಿಸುತ್ತೇನೆ ಅಂತ ಹೇಳುತ್ತಿದ್ದ ಸ್ಪರ್ಧಿಯನ್ನ ನೀವು ಫಾಲೋ ಮಾಡುತ್ತಿದ್ದೀರಾ'' ಅಂತ ಕೀರ್ತಿ ಹೇಳಿದಾಗ ದಿವಾಕರ್ ಅವರಲ್ಲಿ ಬದಲಾವಣೆ ಕಾಣ್ತು. ದಿವಾಕರ್ ಅವರಿಗೆ ಎಲ್ಲ ವಿಷಯ ಗೊತ್ತಿದೆ. ಸ್ಟ್ರಾಟೆಜಿ ಪ್ರಕಾರವೇ ಆಡುತ್ತಿದ್ದಾರೆ'' ಎಂದು ಜಯಶ್ರೀನಿವಾಸನ್ ಹೇಳಿದರು.